Wednesday, May 20, 2020

ರಬ್ಬರ್ ಟ್ಯಾಪಿಂಗ್

ಬಹುಶಃ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದವರಿಗೆ ರಬ್ಬರ್ ಟ್ಯಾಪಿಂಗ್ ಅನ್ನುವುದು ಹೊಸತಲ್ಲ . ಮೊನ್ನೆ ಮಾರ್ಚ್ ೧೮ ರ ವರೆಗೆ ಬೆಂಗಳೂರಿನಲ್ಲಿ ಇದ್ದ ನಾನು, ಲಾಕ್ಡೌನ್ ಪ್ರಭಾವದಿಂಗ ಈ ಹೊಸ ವಿದ್ಯೆ ಕಲಿಯುವ ಆಸಕ್ತಿ ಬಂತು. ಬಾಲ್ಯದಲ್ಲಿ ದೂರದಿಂದಲೇ ರಬ್ಬರ್ ಸಸಿ ನೋಡಿದ್ದ ನನಗೆ , ಈಗ ಪ್ರಾಯ ೩೦ ರಲ್ಲಿ ಅದರ ಪ್ರಾಕ್ಟಿಕಲ್ ಎಕ್ಸ್ಪೀರಿಯೆನ್ಸ್ ಸಿಕ್ಕಿತು .  


ಕೆಲವು ವರ್ಷಗಳ ಹಿಂದೆ ಅಡಿಕೆ ಬೆಳೆಗೆ ಬೆಲೆ ಸಿಗದಿದ್ದಾಗ ನನ್ನ ತಂದೆಯವರಿಗೆ ರಬ್ಬರ್ ತೋಟ ಹಾಕುವ ಆಸಕ್ತಿ ಬಂತು. ಹೇಗೂ ಖಾಲೀ ಗುಡ್ಡ ಇದೆ, ರಬ್ಬರ್ ಸಸಿ ಹಾಕೇ ಬಿಟ್ರು . ಬರೊಬ್ಬರಿ ೭ ವರ್ಷ ಆದಮೇಲೆ ಮೊದಲ ಟ್ಯಾಪಿಂಗ್ ಈ ವರ್ಷ ಶುರು . ಈ ೭ ವರ್ಷ ಸಾಕಿ ಸಲಹಿದ ನನ್ನ ತಂದೆಯವರಿಗೆ ಟ್ಯಾಪಿಂಗ್ ಅನುಭವ ಇರಲಿಲ್ಲ . ಹೇಳಿ ಕೇಳಿ, ಜೆಸಿಬಿ ಬಸ್ಸಿನೆಸ್ಸ್ ಮಾಡುತ್ತಾ ಬಹಳಷ್ಟು ಕಾಂಟ್ಯಾಕ್ಟ್ಸ್ ಇಟ್ಟುಕೊಂಡಿರುವ ನನ್ನ ತಂದೆಯವರಿಗೆ , ಹೊಸ ವಿದ್ಯೆ ಕಲಿಯುವುದು ಕಷ್ಟವಲ್ಲ. ಪಕ್ಕದ ಮನೆಯ ಯೋಗೀಶ, ನನ್ನ ಬಾಲ್ಯದ ಗೆಳೆಯ , ರಬ್ಬರ್ ಟ್ಯಾಪಿಂಗ್ ನಲ್ಲಿ ಪಳಗಿದವ . ರಬ್ಬರ್ ಬೋರ್ಡ್ ನಿಂದ ತರಬೇತಿ ಪಡೆದವ . ಅವನಿಂದ ಕೆಲವು ಸಲಹೆಗಳನ್ನು ಪಡೆದು ಸ್ವತಃ ಟ್ಯಾಪಿಂಗ್ ಶುರು ಮಾಡಿದ್ರು .

ಪ್ರತಿ ೨ ದಿನಕ್ಕೊಮ್ಮೆ ಟ್ಯಾಪಿಂಗ್ ಮಾಡುವುದು ಕಷ್ಟವಲ್ಲ , ಆದರೆ ಬೆಂಗಳೂರಿನಲ್ಲಿ ೭ ಗಂಟೆಗೆ ಏಳುತ್ತಿದ್ದ ನನಗೆ ೪ ಗಂಟೆಗೆ ಏಳುವುದೇ ಸಮಸ್ಯೆ. ಮೊದಲ ದಿನ ಅರ್ಧ ತೋಟ ಟ್ಯಾಪಿಂಗ್ ಮಾಡಿ ಅಂತೂ ನನ್ನನ್ನು ೬ ಗಂಟೆಗೆ ಏಳಿಸಿದರು ಅಪ್ಪ . ಕತ್ತಿ ಹಿಡಿಯುವ ಕ್ರಮ , ಸ್ಕ್ರಾಪ್ ತೆಗೆಯುವುದು, ಗೆರಟೆ ಇಡುವ ಕ್ರಮ ಇವು ಮೊದಲ ಪಾಠ . ನಂತರ ಕಟ್ಟಿಂಗ್. ಇಲ್ಲಿ ಮುಖ್ಯವಾದ ಅಂಶ ಎಂದರೆ ಮರಕ್ಕೆ ಗಾಯ ಆಗದ ಹಾಗೆ ಕಟಿಂಗ್ ಮಾಡುವುದು ಮತ್ತು ಇದರ ಜೊತೆಗೆ ತೋಟದ ಸೊಳ್ಳೆ ಕಚ್ಚಿಸಿಕೊಳ್ಳುವುದು ಅಭ್ಯಾಸ ಮಾಡಿಕೊಳ್ಳಬೇಕು.


ಟ್ಯಾಪಿಂಗ್ ಮಾಡಿ ೨ ಗಂಟೆ ನಂತರ ಗೆರಟೆಗೆ ಬಿದ್ದ ಹಾಲು ತೆಗೆಯುವ ಕೆಲಸ ನಮ್ಮ ಮನೆಯ ಆಳು ಮಹಂತೇಶ. ೩೦ರ ಹರೆಯದ ಈತ ಮೂಲತಃ ಹುಬ್ಬಳಿಯವನು. ಕೆಲಸವನ್ನು ಕಲಿಯುವ ಮತ್ತು ಮಾಡುವ ಮನಸ್ಸು ಇದೆ. ಸಂಗ್ರಹಿಸಿದ ಹಾಲನ್ನು ಸೋಸಿ, ಆಸಿಡ್ ಮಿಕ್ಸ್ ಮಾಡಿ, ಟ್ರೇ ಯಲ್ಲಿ ಗಟ್ಟಿಯಾಗಲು ಬಿಟ್ಟು , ನಂತರ ರಬ್ಬರ್ ಶೀಟ್ ಮಾಡಬಹುದು.



ನನಗೆ ಇದು ಹೊಸ ಅನುಭವ. ಹಂಚಿಕೊಳ್ಳೋಣ ಅನ್ನಿಸ್ತು. ನಿಮಗೆ ಲೊಕ್ಡೌನ್ ನಲ್ಲಿ ಏನಾದರು ಹೊಸ ಅನುಭವ ಆಗಿದ್ದಲ್ಲಿ ನೀವೂ ಹಂಚಿಕೊಳ್ಳಬಹುದು.

ರಬ್ಬರ್ ಟ್ಯಾಪಿಂಗ್

ಬಹುಶಃ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದವರಿಗೆ ರಬ್ಬರ್ ಟ್ಯಾಪಿಂಗ್ ಅನ್ನುವುದು ಹೊಸತಲ್ಲ . ಮೊನ್ನೆ ಮಾರ್ಚ್ ೧೮ ರ ವರೆಗೆ ಬೆಂಗಳೂರಿನಲ್ಲಿ ಇದ್ದ ನಾನು, ಲಾಕ್ಡೌನ್ ಪ್...